ವಕೀಲರ ಪಾಲಿನ ನಿಜವಾದ ಕೂರೋನಾ ವಾರಿಯರ್ :ಎ. ಪಿ ರಂಗನಾಥ.
ವಕೀಲರ ಪಾಲಿನ ನಿಜವಾದ ಕೂರೋನಾ ವಾರಿಯರ್ :ಎ. ಪಿ ರಂಗನಾಥ. ಇಡೀ ಜಗತ್ತೇ ಕೋವಿಡ್ ಸೋಂಕಿನಿಂದ ತತ್ತರಿಸಿದ ಸಂದರ್ಭದಲ್ಲಿ ಬೆಂಗಳೂರಿನ ವಕೀಲರ ಆರೋಗ್ಯದ ಹಿತವನ್ನು ಕಾಪಾಡುವಲ್ಲಿ ಎ. ಪಿ ರಂಗನಾಥ ಅವರ ಪಾತ್ರ ಮುಖ್ಯವಾದದ್ದು. ವಕೀಲರು ಕೋವಿಡ್-19 ಸೋಂಕಿಗೆ ತುತ್ತಾಗಿ ಬೆಡ್ ಸಿಗದೆ ಪರದಾಡಿದಗ ಸರ್ಕಾರದ ಗಮನ ಸೆಳೆದು ವಕೀಲರ ಸಂಘಕ್ಕೆ BBMP ಸಹಯೋಗದಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಯನ್ನು ನೇಮಿಸಿ ವಕೀಲರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕುವಲ್ಲಿ ಶ್ರಮಿಸಿದರು. ಪ್ರಥಮ ಹಂತದಲ್ಲೆ ವಕೀಲರಿಗೆ ಪ್ರತ್ಯೇಕವಾಗಿ ಕೋವಿಡ್-19 ನಿರೋಧಕ ಲಸಿಕೆ ಹಾಕುವ ಶಿಬಿರವನ್ನು ವಕೀಲರ ಸಂಘದ ಆವರಣದಲ್ಲೇ ಮಾಡಿ ವಕೀಲರು ಹಾಗೂ ಅವರ ಕುಟುಂಬ ಸದಸ್ಯರಿಗೆ ಲಸಿಕೆ ದೊರಕುವಂತೆ ಅನುಕೂಲ ಕಲ್ಪಿಸಿದ್ದು ಎ. ಪಿ ರಂಗನಾಥ ಅವರು. ಕೋವಿಡ್-19 ರೋಗಕ್ಕೆ ತುತ್ತಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ವಕೀಲರು ಹಾಗೂ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ವಕೀಲರಿಗೆ ಸಹಾಯ ಧನ ನೀಡುವ ಮೂಲಕ ವಕೀಲ ಸಮುದಾಯದ ಸಮಗ್ರ ಹಿತವನ್ನು ಕಾಯುವಲ್ಲಿ ಎ. ಪಿ ರಂಗನಾಥ ಅವರು ವಕೀಲರ ಪಾಲಿನ ನಿಜವಾದ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದರು.